ಹಕ್ಕಿ ಕಥೆ 5
ನಿನ್ನೆ ರಾತ್ರಿ ಶೆಕೆ
ಹೆಚ್ಚಾಗಿ ಸರಿಯಾಗಿ ನಿದ್ದೇನೇ ಬಂದಿರ್ಲಿಲ್ಲ. ಜೊತೆಗೆ ಈ ಹಕ್ಕಿ ಅರಚಾಟ ಬೇರೆ. ನೀವೇ ಕೇಳಿ ಅದ್
ಹ್ಯಾಗೆ ಬೊಬ್ಬೆ ಹಾಕ್ತಾ ಇದೆ... did he do it.... pity to do it....(2)...
ಬೆಳಗ್ಗೆ ಹೋಗಿ ನೋಡಿದ್ರೆ ಈ ಎರಡೂ ಹಕ್ಕಿಗಳು ಮನೆ ಪಕ್ಕದ ಬಯಲಿನಲ್ಲಿ
ಓಡಾಡ್ತಾ ಇದ್ವು..
ಸಾಮಾನ್ಯ ಕೆರೆ, ನದಿಗಳ
ಹತ್ರ ಬಯಲು ಪ್ರದೇಶಗಳಲ್ಲಿ ಕಾಣ್ಲಿಕ್ಕೆ ಸಿಗೋ ಈ ಹಕ್ಕೀನ ಬಹಳಷ್ಟುಜನ ನೋಡಿರ್ತೀರಿ. ಮಾರ್ಚ್ ನಿಂದ
ಆಗಸ್ಟ್ ತಿಂಗಳ ಮಧ್ಯೆ ಇದರ ಸಂತಾನಾಭಿವೃದ್ಧಿ ಕಾಲ. ಈ ಸಮಯದಲ್ಲಿ ಇವುಗಳು ಕೂಗೋದು ಜಾಸ್ತಿ.. ಇವು
ಗೂಡು ಅಂತೇನೂ ಮಾಡೋದಿಲ್ಲ. ನೆಲದ ಮೇಲೆ ದುಂಡಗಿನ ಕಲ್ಲುಗಳ ಜೊತೆ ಮಬ್ಬು ಬಣ್ಣದ ತಕ್ಷಣ ಗುರುತಿಸಲು
ಸಾಧ್ಯವಾಗದ
3-4 ಮೊಟ್ಟೆಗಳನ್ನುಇಡ್ತದೆ. ಮೊಟ್ಟೆಗಳ ಗಾತ್ರ ಸುಮಾರು 4cm ಅಂದ್ರೆ ಕೋಳಿಮೊಟ್ಟೆಯ
ಅರ್ದ ಗಾತ್ರದ್ದು. ನೆಲದ ಮೇಲೆ ಮೊಟ್ಟೆಗಳು ಯಾವುದು ಕಲ್ಲು ಯಾವುದು ಅಂತ ಗುರುತುಹಿಡಿಯೋದು ಭಾರೀ
ಕಷ್ಟದ ಕೆಲಸ. ಸಿಟಿಗಳಲ್ಲಿ ಕಟ್ಟಡದ ಮೇಲೆ ಟೆರೇಸ್ ಗಳಲ್ಲಿ ಮಾತ್ರ ಅಲ್ಲ ರೈಲ್ವೇ ಹಳಿಗಳ ಮದ್ಯೆ ಮೊಟ್ಟೆ
ಇಟ್ಟು ಮರಿಮಾಡಿದ ಉದಾಹರಣೆಗಳೂ ಇದೆ. ಮೊಟ್ಟೆ ಇಟ್ಟಮೇಲೂ ಏನಾದ್ರೂ ಅಪಾಯ ಅನ್ಸಿದ್ರೆ ನಿಧಾನವಾಗಿ
ಮೊಟ್ಟೆಗಳನ್ನು ಉರುಳಿಸಿಕೊಂಡು ಹೋಗಿ ಗೂಡಿನ ಜಾಗ ಬದಲಾಯಿಸಿದ್ದೂ ಇದೆ ಅಂತ ಹೇಳ್ತಾರೆ.
ಸುಮಾರು 28- 30 ದಿನಗಳಲ್ಲಿ ಮೊಟ್ಟೆ ಒಡೆದು ಮರಿಗಳು ಹೊರಗಡೆ
ಬರ್ತವೆ. ಹೊರಗಡೆ ಬಂದ ಕ್ಞಣದಿಂದಲೇ ನಡೆದಾಡುವ ಸಾಮರ್ಥ್ಯ ಈ ಮರಿಗಳಿಗೆ ಇರ್ತದೆ, ಅವಾಗಿಂದಲೇ ತಮ್ಮ
ತಂದೆ ತಾಯಿಗಳನ್ನು ಇವು ಹಿಂಬಾಲಿಸುತ್ತವೆ. ಏನಾದರೂ ಆಪತ್ತಿನ ಸೂಚನೆ ಸಿಕ್ಕಿದ ತಕ್ಷಣ ನೆಲದಲ್ಲಿ
ಅಥವಾ ಹುಲ್ಲುಗಳ ಎಡೆಯಲ್ಲಿ ಅಡಗಿಕೊಳ್ಳುತ್ತವೆ.
ನೆಲದ ಮೇಲೆ ಸಿಗುವ ಕೀಟಗಳೇ ಇವುಗಳ ಮುಖ್ಯ ಆಹಾರ. ಜೊತೆಗೆ ಶಂಕುಹುಳದಂತಹ
ಜೀವಿಗಳನ್ನೂ, ಕೆಲವೊಮ್ಮೆ ಕಾಳುಗಳನ್ನೂ ತಿನ್ನುತ್ತದೆ. ಬಿರುಬೇಸಗೆಯ ದಿನಗಳಲ್ಲಿ ತನ್ನ ಹೊಟ್ಟೆಯನ್ನು
ನೀರಿನಲ್ಲಿ ಒದ್ದೆಮಾಡಿಕೊಂಡು ಬಂದು ಮರಿಗಳಿಗೆ ನೀರು ಉಣಿಸುತ್ತಂತೆ.
ಇವು ರಾತ್ರಿಯೆಲ್ಲ ಕೂಗ್ತಾ
ಇರ್ತವಲ್ಲಾ ಹಾಗಾದ್ರೆ ಇವು ನಿದ್ರೆ ಮಾಡೋದಿಲ್ವಾ ಅಂತ ಕೆಲವರು ಕೇಳ್ತಾರೆ. ಸಂತಾನಾಭಿವೃದ್ಧಿ ಕಾಲದಲ್ಲಿ
ಅಗತ್ಯ ಬಿದ್ರೆ ಇವು ರಾತ್ರೆಯೂ ಎಚ್ಚರವಾಗಿ ಇರ್ತವೆ.
ಈ ಹಕ್ಕಿ ನದಿಗಿಂತಾ ತುಂಬ
ಎತ್ತರ ಪ್ರದೇಶದಲ್ಲಿ ಗೂಡು ಮಾಡಿದ್ರೆ ಭಾರೀ ಮಳೆಗಾಲ ಬರುತ್ತೆ, ಒಣಗಿದ ನದಿಯ ಮದ್ಯದಲ್ಲಿ ಗೂಡು ಮಾಡಿದ್ರೆ
ಮಳೆಗಾಲ ಬರೋದು ತಡ ಆಗುತ್ತೆ , ನದಿಬದಿಯಲ್ಲೇ ಮೊಟ್ಟೆ ಇಟ್ರೆ ಮಳೆಗಾಲ ಸರಿಯಾದ ಸಮಯಕ್ಕೆ ಬರುತ್ತೆ
ಅಂತ ಕೆಲವುಕಡೆ ಜನ ನಂಬ್ತಾರಂತೆ. ಪ್ರಾಣಿ ಪಕ್ಷಿಗಳು ನಮಗಿಂತ ಬೇಗ ಪರಿಸರದ ಬದಲವಣೆಗಳನ್ನ sence
ಮಾಡ್ತವೆ, ಅವುಗಳನ್ನು ನೋಡಿ ಪ್ರಕೃತಿಗೆ ಹತ್ತಿರವಾಗಿ ಬದುಕೋದನ್ನು ನಾವು ಕಲೀಬೇಕು ಅಲ್ವಾ..
ಏನು ಇಷ್ಟೆಲ್ಲಾ ಕತೆ
ಹೇಳಿ ಈ ಹಕ್ಕಿ ಹೆಸರೇ ಹೇಳ್ಲಿಲ್ಲ ಅಂತಿದೀರಾ.. ಅಷ್ಟಾಂಗ ಯೋಗದಲ್ಲಿ ಒಂದು ಆಸನ ಇದೆ. ಎರಡೂ ಕಾಲಿಗಳನ್ನು
ಭುಜದ ಹಿಂಬಾಗದಿಂದ ಮೇಲ್ಮುಖವಾಗಿ ಎತ್ತಿ ಕೈಗಳ ಆಧಾರದಲ್ಲಿ ನಿಲ್ಲುವ ಭಂಗಿ, ಅದೇ ಟಿಟ್ಟಿಭಾಸನ...
ಹಕ್ಕಿಯಿಂದಾಗಿ ಆಸನಕ್ಕೆ ಈ ಹೆಸರು ಬಂತು ಅಂತ ಹೇಳ್ತಾರೆ.. Yes you are right.. ಈ ಹಕ್ಕಿಯ ಕನ್ನಡ ಹೆಸರು ಟಿಟ್ಟಿಭ..
ಮಲೆನಾಡಿನ ಕಡೆ ತೇನೆಹಕ್ಕಿ ಅಂತ ಕರೀತಾರೆ, ಕರಾವಳಿಯಲ್ಲಿ
ಟ್ಯಾಂಟ್ರಕ್ಕಿ ಅಂತ್ರ್, ಇನ್ನು ಕೆಲವರು ಟವಕ್ಕಿ ಅಂತನೂ, ತುಳುವಿನಲ್ಲಿ ಟಿರಿಂ ಟಿರಿ ಪಕ್ಕಿ ಅಂತಾನೂ
ಕರೀತಾರೆ...
ಇದರ English ಹೆಸರು Red Wattled Lapwing.. ನಿಮ್ಮೂರಲ್ಲಿ ಈ ಹಕ್ಕಿಯನ್ನ
ಏನೂಂತ ಕರೀತಾರೆ ನಮಗೂ ತಿಳಿಸ್ತೀರಲ್ಲಾ .....
ರಜಾ ದಿನಗಳ ಮಜಾ ಹೆಚ್ಚು ಮಾಡ್ಲಿಕ್ಕೆ ಅಂತ ನಾನು ಈ ಹಕ್ಕಿ ಚಿತ್ರಬರಿಯೋ
ಪ್ರಯತ್ನ ಮಾಡಿದ್ದೇನೆ, ನೀವೂ ನಿಮ್ಮ ಇಷ್ಟದ ಹಕ್ಕಿಯ ಚಿತ್ರ ಬರೀರಿ... ಮತ್ತೆ ಸಿಗೋಣ










